Satish B. SettyArchiveAboutRSS Feed

ಕರುಣೆ ಇಲ್ಲದ …

ಆಲೋಚನಾತ್ಮಕ ಹಾಡುಗಳಲ್ಲಿ “ಅಸುರ” ಚಿತ್ರದ “ಕರುಣೆ ಇಲ್ಲದ ಧರಣಿಯ ಕಂಡೆ” ಎಂಬುದೂ ಸಹ ಒಂದು. ಗಾಯಕರು ರಾಜೇಶ್ ಕೃಷ್ಣನ್. ನಾಯಕನಟ ಶಿವರಾಜ್ ಕುಮಾರ್. ದೃಷ್ಯಸುರಳಿಯನ್ನು ಯೂಟ್ಯೂಬ್ ನಲ್ಲಿ ಕಾಣಬಹುದು. ೮೮ ವಾಕ್ಯಗಳನ್ನು ಒಳಗೊಂಡಿರುವ ಅದ್ಭುತ ಪದ್ಯವಿದು. ಇದನ್ನು ಮೊದಲು ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಾಡಿರುವರು.

ಕರುಣೆ ಇಲ್ಲದ ಧರಣಿಯ ಕಂಡೆ
ಕೆಂಡವ ಕಾರುವ ಗಗನವ ಕಂಡೆ
ವಿಷವನು ತೂರುವ ಗಾಳಿಯ ಕಂಡೆ
ಎದೆಯನು ಉರಿಸೋ ಬೆಂಕಿಯ ಕಂಡೆ
ಸುಳಿಯಲಿ ಮುಳುಗಿಸೊ ನೀರನು ಕಂಡೆ
ಬೊಗಸೆಯ ನೀರಲು ಸುಳಿಯನು ಕಂಡೆ
ಹೂವಿನ ಎದೆಯಲಿ ಮುಳ್ಳನು ಕಂಡೆ
ಹಿಮದಲಿ ಜ್ವಾಲಾಮುಖಿಯನು ಕಂಡೆ
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ
ಹಾಡಲು ಬಾರದ ಕೋಗಿಲೆ ಕಂಡೆ
ಮುತ್ತೇ ಇಲ್ಲದ ಕಡಲನು ಕಂಡೆ
ಗಂಧವ ಚೆಲ್ಲದ ಹೂಗಳ ಕಂಡೆ
ಜೇನನು ಹೀರದ ದುಂಬಿಯ ಕಂಡೆ
ದಿನಗಳ ನುಂಗುವ ಕ್ಷಣಗಳ ಕಂಡೆ
ದಿಕ್ಕುಗಳಿಲ್ಲದ ದಾರಿಯ ಕಂಡೆ
ದಾರಿಗಳಿಲ್ಲದ ದಿಕ್ಕನು ಕಂಡೆ
ಮೋಡದ ಹನಿಯಲು ಬೆವರನು ಕಂಡೆ
ಗಾಳಿಯ ಎದೆಯಲು ನಡುಕವ ಕಂಡೆ
ಮಳೆಯಾ ಬಿಲ್ಲಲು ಕೊಳೆಯನು ಕಂಡೆ
ಇಬ್ಬನಿ ಕಣ್ಣಲು ಕಂಬನಿ ಕಂಡೆ
ಗರ್ಭದ ಒಳಗೂ ಅಳುವನು ಕಂಡೆ
ಕೆಚ್ಚಲ ಹಾಲಲು ವಿಷವನು ಕಂಡೆ
ಕಬ್ಬಿನ ಎದೆಯಲಿ ಬೇವನು ಕಂಡೆ
ನಗುವಿನ ಹೆಸರಲಿ ನೋವನು ಕಂಡೆ
ಸಂಬಂಧಗಳಲಿ ಬಂಧನ ಕಂಡೆ
ಬಂಧನ ಬಿಡಿಸುವ ಕಂಪನ ಕಂಡೆ
ಜೀವನಕೊಂದು ಯೌವನ ಕಂಡೆ
ಯೌವನಕೊಂದು ಜೀವನ ಕಂಡೆ
ಚಪ್ಪಾಳೆಗಳಲೂ ಸಿಡಿಲನು ಕಂಡೆ
ಬೆವರಿಳಿಸುವ ಬೆಳದಿಂಗಳ ಕಂಡೆ
ಅವುಡುಗಚ್ಚುವ ನಿದ್ದೆಯ ಕಂಡೆ
ಪಲ್ಲವಿ ಇರದ ಚರಣವ ಕಂಡೆ
ಗಂಡೆದೆಯಲ್ಲೂ ಗ್ರಹಣವ ಕಂಡೆ
ಸ್ವತಂತ್ರವಿಲ್ಲದ ಗಾಳಿಯ ಕಂಡೆ
ಬಾನೇ ಇಲ್ಲದ ಬಾನಾಡಿ ಕಂಡೆ
ಜಾತಕವಿಲ್ಲದ ಕನಸನು ಕಂಡೆ
ಜ್ಞಾಪಕವಿಲ್ಲದ ನೆನಪನು ಕಂಡೆ
ತೂಕವೇ ಇಲ್ಲದ ಮಾತನು ಕಂಡೆ
ಸಿಡಿಲೆರೆಯುವ ಬಿರುಮೌನವ ಕಂಡೆ
ಚೆಲುವಿನ ಮುಖದಲಿ ಕುರೂಪ ಕಂಡೆ
ಒಲವಿನ ವ್ಯಾಘ್ರ ಸ್ವರೂಪ ಕಂಡೆ
ರುಚಿಗಳೆ ಇಲ್ಲದ ಊಟವ ಕಂಡೆ
ಅಭಿರುಚಿಕಾಣದ ಪಾಠವ ಕಂಡೆ
ಅಳುವಾ ವಯಸಲಿ ಆಸೆಯ ಕಂಡೆ
ಆಡೋ ವಯಸಲಿ ಅವನತಿ ಕಂಡೆ
ಕಲಿಯೋ ವಯಸಲಿ ಬಲಿಯನು ಕಂಡೆ
ಒಂಟೀತನದಲಿ ಗಾಯವ ಕಂಡೆ
ಜಂಟೀತನದಲಿ ಮಾಯವ ಕಂಡೆ
ನವಿಲೂ ಕಾಣದ ಗರಿಯನು ಕಂಡೆ
ಗುರುವೇ ಇಲ್ಲದ ಗುರಿಯನು ಕಂಡೆ
ಸೂರ್ಯನ ಕಣ್ಣಲಿ ತೇವವ ಕಂಡೆ
ಇರುಳಲಿ ಬೆಳಗಿನ ಜಾವವ ಕಂಡೆ
ರಾಜರು ಕಟ್ಟಿದ ಕೋಶವ ಕಂಡೆ
ಕೋಶವ ಮುರಿಯೋ ಶಾಸನ ಕಂಡೆ
ದಾಸರು ಕಾಣದ ಪದವನು ಕಂಡೆ
ಬಡತನಕಿಂತಲೂ ಬಡತನ ಕಂಡೆ
ಧರ್ಮರಾಯನಲೂ ಸುಳ್ಳನು ಕಂಡೆ
ಆಂಜನೇಯನಲೂ ಅಹಮ್ಮು ಕಂಡೆ
ತಾಯಿಮಾತಲೂ ತಪ್ಪನು ಕಂಡೆ
ಭುವನೇಶ್ವರಿಯಲೂ ಭೇದವ ಕಂಡೆ
ನೆತ್ತರು ತುಂಬಿದ ಅನ್ನವ ಕಂಡೆ
ಹುಟ್ಟೂ ಸಾವಿನ ನಂಟನು ಕಂಡೆ
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ
ಹಗೆಯಲಿ ಸಲ್ಲದ ಹರ್ಷ ಕಂಡೆ
ಸಹಿಸುವ ಆಸರೆಯೊಂದು ಕಂಡೆ
ದಹಿಸುವ ಧಮನಿಗಳನ್ನೂ ಕಂಡೆ
ಸ್ನೇಹದ ಕೋಟಿ ಪವಾಡ ಕಂಡೆ
ದ್ರೋಹದ ಹೊಸ ಮುಖವಾಡ ಕಂಡೆ
ಇಳಿಸಲು ಆಗದ ಹೊರೆಯನು ಕಂಡೆ
ಹಣೆಬರಹಕೆ ಪ್ರತಿ ಹೊಣೆಯನು ಕಂಡೆ
ಛಲದಾ ಮನಸಿಗೆ ಛಾವಡಿ ಕಂಡೆ
ಮನಸಾ ತುಂಬಿಸೋ ಲೇವಡಿ ಕಂಡೆ
ಸೋಲುಗಳಲ್ಲೇ ಗಲುವನು ಕಂಡೆ
ಗಲುವಲೇ ಸೋಲಿನ ರುಚಿಯನು ಕಂಡೆ
ಕಂಗಳ ತಿವಿಯುವ ಕನ್ನಡಿ ಕಂಡೆ
ಬದುಕನೇ ಕಲಕುವ ಮುನ್ನಡಿ ಕಂಡೆ
ಇಳಿಜಾರಿನಲಿ ದಿಣ್ಣೆಯ ಕಂಡೆ
ದಿಣ್ಣೆಯಲಿ ಇಳಿಜಾರನು ಕಂಡೆ
ಹೆಳವನ ದಾರಿಯ ವೇಗವ ಕಂಡೆ
ಮೂಗನ ಎದೆಯಲೂ ರಾಗವ ಕಂಡೆ
ಮೂರ್ಖನ ಕೈಯಲಿ ಮಾರ್ಗವ ಕಂಡೆ
ಕಾಲದ ಕೈಯಲಿ ಖಡ್ಗವ ಕಂಡೆ
ಜೊತೆಯಲಿ ಬಾಳುವ ಕಥೆಗಳ ಕಂಡೆ
ಕಥೆಯಾಗಿರುವಾ ಜೊತೆಯಾ ಕಂಡೆ
ಜೀವನದುದ್ದಕೂ ನೋವನೆ ಕಂಡೆ
ಆದರು ಪ್ರೀತಿಯು ಕಾಣಲಿಲ್ಲ
ಬಯಸಿದ್ದೊಂದೂ ಸಿಗಲಿಲ್ಲ
ಸತ್ತು ಬದುಕೋ ಬದುಕೇಕಿನ್ನು ಪ್ರೀತಿಸೊ ಮರಣಾ ಮರಣಾ ಕಂಡೇಏಏಏ